Aditya Birla capital scholarship :- ನಮಸ್ಕಾರ ಸ್ನೇಹಿತರೇ ಕರ್ನಾಟಕ ಸಮಸ್ತ ಜನರಿಗೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೇನೆಂದರೆ. ಸ್ನೇಹಿತರೆ ಆದಿತ್ಯ ಬಿರ್ಲಾ ಕ್ಯಾಪಿಟಲ್ ವಿದ್ಯಾರ್ಥಿವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಪ್ರಾರಂಭಿಸಲಾಗಿದೆ. ಆದಿತ್ಯ ಬಿರ್ಲಾ ಕ್ಯಾಪಿಟಲ್ ಸ್ಕಾಲರ್ಶಿಪ್ ಗೆ ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು, ಯಾರು ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು, ಎಲ್ಲ ಸಂಪೂರ್ಣ ಮಾಹಿತಿಗಳನ್ನು ತಿಳಿದುಕೊಳ್ಳಲು ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ನೋಡಿ.
ಗೆಳೆಯರೇ ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ ವತಿಯಿಂದ ಆದಿತ್ಯ ಬಿರ್ಲಾ ಕ್ಯಾಪಿಟಲ್ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದಾರೆ ಶಾಲಾ ಮತ್ತು ಕಾಲೇಜಿಗೆ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣವನ್ನು ಮುಂದುವರಿಸುವ ಸಲುವಾಗಿ ಹಣಕಾಸಿನ ನೆರವು ಮತ್ತು ಮಾರ್ಗದರ್ಶನ ಬೆಂಬಲವನ್ನು ಒದಗಿಸುವ ಗುರಿಯನ್ನು ಈ ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಹೊಂದಿದೆ ಎಂದು ತಿಳಿಯಬಹುದಾಗಿದೆ.
Aditya Birla capital scholarship ಅದಿತ್ಯ ಬಿರ್ಲಾ ಕ್ಯಾಪಿಟಲ್ ವಿದ್ಯಾರ್ಥಿವೇತನ
ಒಂಬತ್ತನೇ ತರಗತಿಯಿಂದ 12ನೇ ತರಗತಿಯವರೆಗೂ ಅಂತಹ ವಿದ್ಯಾರ್ಥಿಗಳು ಅಥವಾ ಪದವಿ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಈ ಆದಿತ್ಯ ಬಿರ್ಲಾ ಕ್ಯಾಪಿಟಲ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ ಪ್ಲೀಸ್ ಕಾಲರ್ ಶಿಪ್ ನ ಉಪಯೋಗಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು. ಈ ವಿದ್ಯಾರ್ಥಿ ವೇತನದ ಪ್ರಯೋಜನಗಳೇನು ಎಂಬುದರ ಮಾಹಿತಿ ಕೆಳಗೆ ನೋಡೋಣ ಬನ್ನಿ.
Aditya Birla capital scholarship ವಿದ್ಯಾರ್ಥಿ ವೇತನದ ಪ್ರಯೋಜನಗಳು.
- 9ನೇ ತರಗತಿಯಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ 12,000 ಗಳು ಸಿಗುತ್ತದೆ.
- ಸಾಮಾನ್ಯ ಪದವಿ ವಿದ್ಯಾರ್ಥಿಗಳಿಗೆ 18 ಸಾವಿರ ರೂಪಾಯಿಗಳು ಸಿಗುತ್ತದೆ
- ವೃತ್ತಿಪರ ಪದವಿ ( ಮೂರು ವರ್ಷಗಳು) ವಿದ್ಯಾರ್ಥಿಗಳಿಗೆ 48,000 ಸಿಗುತ್ತದೆ.
- ವೃತ್ತಿಪರ ಪದವಿ ( ನಾಲ್ಕು ವರ್ಷಗಳು) ಇಂತಹ ವಿದ್ಯಾರ್ಥಿಗಳಿಗೆ 60000 ವಿದ್ಯಾರ್ಥಿ ವೇತನ ನೀಡುತ್ತದೆ.
Aditya Birla capital scholarship ಅರ್ಹತೆಗಳು
- 9 ರಿಂದ 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಅರ್ಜಿ ಸಲ್ಲಿಸಬಹುದು
- ಭಾರತದಲ್ಲಿ ಮಾನ್ಯತೆ ಪಡೆದಿರುವ ಕಾಲೇಜುಗಳು ಹಾಗೂ ವಿಶ್ವವಿದ್ಯಾನಿಲಯಗಳಿಂದ ಯಾವುದೇ ಸಾಮಾನ್ಯ ಪದವಿ ಕೋರ್ಸ್ 3 ವರ್ಷಗಳು ವೃತ್ತಿಪರ ಪದವಿ ಹಾಗೂ 4 ವರ್ಷಗಳು ವೃತ್ತಿಪರ ಪದವಿ ಕೊಡಿಸುವ ವಿದ್ಯಾರ್ಥಿ ಗಳು ಅರ್ಜಿ ಸಲ್ಲಿಸಬಹುದಾಗಿದೆ.
- ವಿದ್ಯಾರ್ಥಿಗಳ ಇಂದಿನ ತರಗತಿಯಲ್ಲಿ ಕನಿಷ್ಠ 60% ಅಂಕ ಗಳಿಸಿರಬೇಕು.
- ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯದ 6 ಲಕ್ಷಕ್ಕಿಂತ ಕೆಳಗೆ ಇರಬೇಕು.
- ಆದಿತ್ಯ ಬಿರ್ಲಾ ಕ್ಯಾಪಿಟಲ್ ಲಿಮಿಟೆಡ್ ಮತ್ತು ಅದರ ರಂಗಸಂಸ್ಥೆಗಳ ಮಕ್ಕಳು ಮತ್ತು buddy4study ಉದ್ಯೋಗಿಗಳು ಅರ್ಹರಲ್ಲ.
Aditya Birla capital scholarship ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು
- ಅಭ್ಯರ್ಥಿಯ ಆಧಾರ್ ಕಾರ್ಡ್
- ಪಾಸ್ಪೋರ್ಟ್ ಗಾತ್ರದ ಫೋಟೋ
- ಇಂದಿನ ಶೈಕ್ಷಣಿಕ ಅರ್ಹತೆ ಅಂಕಪಟ್ಟಿ
- ವೋಟರ್ ಐಡಿ,ಚಾಲನ ಪರವಾನಿಗೆ, ಪ್ಯಾನ್ ಕಾರ್ಡ್ ಇದರಲ್ಲಿ ಯಾವುದಾದರೂ ಒಂದು.
- ಪ್ರಸಕ್ತ ವರ್ಷದ ಪ್ರವೇಶ ಪುರಾವೆ
- ಬ್ಯಾಂಕ್ ಖಾತೆ ವಿವರ
- ಆದಾಯ ಪ್ರಮಾಣ ಪತ್ರ.
ಈ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಂಡು ಈ ಮೇಲೆ ನೀಡಲಾದ ದಾಖಲೆಗಳನ್ನು ತೆಗೆದುಕೊಂಡು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.
ಗಮನಿಸಿ :- ಸ್ನೇಹಿತರೆ ಈ ಲೇಖನ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಮ್ಮ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇತರ ಇನ್ನಷ್ಟು ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ Karnataka mahiti.com ವೆಬ್ ಸೈಟಿಗೆ ಭೇಟಿ ನೀಡಿ ಅಥವಾ ನಮ್ಮ WHATSAPP ಮತ್ತು TELEGRAM ಗ್ರೂಪ್ಗಳಿಗೆ ಜಾಯಿನ್ ಆಗಿ ಇದೇ ರೀತಿಯ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಕಂಡುಕೊಳ್ಳಿ…